ಎಚ್ ಡಿ ಕುಮಾರಸ್ವಾಮಿ ಕರ್ನಾಟಕ ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ. ನಡೆ ಮತ್ತು ನುಡಿ ಎರಡರಲ್ಲೂ ಸರಳತನ ಮೈಗೂಡಿಸಿಕೊಂಡ ಇವರು ಜನರ ಬಳಿಗೆ ಹೆಜ್ಜೆ ಹಾಕಿದವರು. ಅಷ್ಟೇ ಅಲ್ಲ, ಜನರ ಬಳಿಗೆ ಆಡಳಿತ ಯಂತ್ರವನ್ನೇ ಕರೆದೊಯ್ದವರು. ಸರ್ಕಾರ ಇದ್ದ ಕಡೆ ಜನಸಾಮಾನ್ಯರು ಬರಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದ್ದಾಗ ಜನರಿದ್ದೆಡೆ ನಾನು, ಜನರಿದ್ದೆಡೆ ನನ್ನ ಅಧಿಕಾರಿಗಳು, ಜನರಿಗಾಗಿ ನನ್ನ ಯೋಜನೆಗಳು ಎಂದು ನಡೆದವರು. ಜನರ ನಡುವೆ ಕುಳಿತು ಅವರ ದುಃಖ ದುಮ್ಮಾನಗಳನ್ನು ಆಲಿಸಿದವರು. ಈ ಎಲ್ಲ ಕಾರಣಗಳಿಂದಾಗಿಯೇ ಶ್ರೀ ಎಚ್ ಡಿ ಕುಮಾರಸ್ವಾಮಿ ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಹಾಗಾಗಿಯೇ ಇವರು ನಮ್ಮ ಎಚ್ ಡಿ ಕೆ.